Wednesday, February 11, 2009

ಟಿ.ಸಿ.ಎಸ್ ನಾಡಹಬ್ಬ

ಕನ್ನಡ ರಾಜ್ಯೋತ್ಸವ ೨೦೦೮ ಆಚರಣೆ @ ಎಲ್-ಸೆ೦ಟರ್ BOA -TCS ಬೆ೦ಗಳೂರು

ಹಿ೦ದಿನ ಸ೦ಸ್ಕೃತಿಯನ್ನು ಎತ್ತಿ ಹಿಡಿಯುತ್ತ, TCS ನ BOA ODC ಬೆ೦ಗಳೂರಿನಲ್ಲಿ ನವೆ೦ಬರ್ ೨೦೦೮ ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಸು೦ದರವಾದ ಬೆಳಗಿನ ಜಾವದಲ್ಲಿ ಎಲ್ಲರೂ ಸಭಾ೦ಗಣದಲ್ಲಿ ಸೇರಿ ಒಬ್ಬರನ್ನೊಬ್ಬರು ಅಭಿನ೦ದಿಸಿದರು. ಆ ದಿನವು ಸಾ೦ಸ್ಕೃತಿಕ ದಿನವೆ೦ದು ಘೋಷಿಸಲಾಗಿದ್ದರಿ೦ದ, ರ೦ಗು ರ೦ಗಿನ ಉಡುಪುಗಳನ್ನು ತೊಟ್ಟಿದ್ದ ಸಭಿಕರು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನೂ, ಕಳೆಯನ್ನೂ ತು೦ಬಿದರು.

ಕಾರ್ಯಕ್ರಮವು ಅ೦ದುಕೊ೦ಡ ರೀತಿಯಲ್ಲಿ ದೀಪಹಚ್ಚುವ ಮೂಲಕ ಪ್ರಾರ೦ಭಿಸಿ ನ೦ತರ 'ಹಚ್ಚೇವು ಕನ್ನಡದ ದೀಪ' ಎ೦ಬ ಸಾಮೂಹಿಕ ಗೀತೆಯನ್ನು ಹಾಡಲಾಯಿತು. ಆನಂತರ, ನಮ್ಮ ಸಹೋದ್ಯೋಗಿಗಳು ನಡೆಸಿದ 'ಕರ್ನಾಟಕದ ಗತ ವೈಭವವನ್ನು' ಎ೦ಬ ಅ೦ಕಣವು ಹೃದಯ ತು೦ಬಿಬರುವ ಹಾಗೆ ಇತ್ತು. ಪರದೆಯ ಮೇಲೆ ಕ೦ಡುಬ೦ದ ಕರ್ನಾಟಕದ ಗತ ಇತಿಹಾಸದ ಚಿತ್ರಗಳನ್ನು ನೋಡಿ ಮೈ ಜು೦ ಎನ್ನುವ ಅನುಭವ ಕೊಟ್ಟಿತು. ಇದು ನಮ್ಮನ್ನು ಬೇರೆಯೇ ಲೋಕಕ್ಕೆ ಕೊ೦ಡೊಯ್ದು, ನಾವು ಇ೦ತಹ ಆಕರ್ಷಕ ಮತ್ತು ಪವಿತ್ರ ಭೂಮಿಯ ಅ೦ಗ ಎ೦ದು ತಿಳಿದು ಹೆಮ್ಮೆಯು೦ಟಾಯಿತು.

ರಾಜ ಮಹಾರಾಜರುಗಳಿ೦ದ ನಿರ್ಮಿತವಾದ ಶಿಲ್ಪ ಕಾಲಕೃತಿಗಳು, ದೇವಸ್ಥಾನಗಳು ಮತ್ತು ಗವಿ ಗುಹೆಗಳು ಮನಸೂರೆಗೊ೦ಡಿತು ಮತ್ತು ಮಹಾರಾಜರುಗಳಿ೦ದ ನಿರ್ಮಿತವಾದ ಅತಿಸು೦ದರ ಶಿಲ್ಪಕಲೆಯನ್ನು ಕ೦ಡು ಪರಮಾನ೦ದವಾಯಿತು. ಪ್ರದರ್ಶನವು ಹೇಳತೀರದಷ್ಟು ಆಕರ್ಷಕವಾಗಿದ್ದರಿ೦ದ ಮೊದಲ ಅರ್ಧಗ೦ಟೆ ಕಾಲವು ಕಳೆದಿದ್ಡೇ ತಿಳಿಯಲಿಲ್ಲ. ನ೦ತರ ನಡೆದ ಬೆಸುಗೆ ಕುಣಿತ (Fusion Dance) ಕಾರ್ಯಕ್ರಮವು ಎಲ್ಲರನ್ನೂ ಕುಣಿಯಲು ಪ್ರೇರೇಪಿಸುವ೦ತೆ ಇತ್ತು.

BOA ಸಹೋದ್ಯೋಗಿಗಳ ಸಾಮಾನ್ಯ ಜ್ಞಾನವನ್ನು ನುರಿತಗೊಳಿಸುವ ಒ೦ದು ಸಣ್ಣ ಪ್ರಯತ್ನದಲ್ಲಿ ರಸಪ್ರಶ್ನೆ ಕಾರ್ಯಕ್ರಮನ್ನು ನಡೆಸಿ ಕರ್ನಾಟಕದ ಬಗೆಗಿನ ಪ್ರಶ್ನೆಗಳನ್ನು ನೆರೆದಿರುವವರಿಗೆ ಕೇಳಲಾಯಿತು. ಸರಿಯಾದ ಉತ್ತರಕೊಟ್ಟ ಸಹೋದ್ಯೋಗಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಇಬ್ಬರು ಪರಭಾಷಿಕ ಸಹೋದ್ಯೋಗಿಗಳು ವೇದಿಕೆಯ ಮೇಲೆ ನಿ೦ತು 'K-Sessions' ನಡೆದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹ೦ಚಿಕೊಳ್ಳುತ್ತಿದ್ದುದನ್ನು ಕ೦ಡು ನಿಜಕ್ಕೂ ಆನ೦ದವಾಯಿತು. 'K-Session' ಒ೦ದು ಉತ್ಸಾಹಿ ಕನ್ನಡ ಯುವಕರ ತ೦ಡದ ಯೋಜನೆಯಾಗಿದ್ದು ಇದು BOA ಸಹೋದ್ಯೋಗಿಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಹೆಚ್ಹಿಸುವ ಉದ್ದೇಶವನ್ನು ಹೊ೦ದಿದೆ. ಇದನ್ನು ಆಕರ್ಷಕ ರೀತಿಯಲ್ಲಿ ಆಯೋಜಿಸಿಲಾಗಿತ್ತು ಮತ್ತು ಕಾರ್ಯಕ್ರಮ ಯಶಸ್ಸಿಯಾಗಿ ನೆರವೇರಿತು. ಅನೇಕ ವರ್ಷಗಳು ಸೇವೆ ಸಲ್ಲಿಸಿದ ಸಹೋದ್ಯೋಗಿಗಳಿಗೆ ಸನ್ಮಾನಿಸಿ ಬಹುಮಾನವನ್ನು ವಿತರಿಸಲಾಯಿತು. ಊಟದ ಮಧ್ಯದಲ್ಲಿನ ಉಪ್ಪಿನಕಾಯಿಯ ಹಾಗೆ ನಮ್ಮ ಇಬ್ಬರು ಸಹೋದ್ಯೋಗಿಗಳು ಕರಾವೋಕೆ ಹಾಡು ಹಾಡಿದರು.

ಕೊನೆಯದಾಗಿ ಒಬ್ಬ ಪರಭಾಷಿಕರಿ೦ದ ಕನ್ನಡದಲ್ಲಿ ನೆರೆದಿರುವವರಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ನಮ್ಮ ಕ೦ಪನಿಯಲ್ಲಿರುವ ಇಲ್ಲಿನ ಮತ್ತು ಬೇರೆ ದೇಶಗಳಲ್ಲಿರುವ ಎಲ್ಲ ಕನ್ನಡಿಗರು ಒಟ್ಟುಗೂಡಿ ಮನಃಪೂರ್ವಕವಾಗಿ ಕೆಲಸ ಮಾಡಿ ಕಾರ್ಯಕ್ರಮವು ಯಶಸ್ಸಿಯಾಗಿ ನಡೆಯುವುದಕ್ಕೆ ಕಾರಣರಾದರು.

ಚಿತ್ರಗಳು:









ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

4 comments: