ಅನಂತರದಲ್ಲಿ ಮೂಡಿಬಂದ ಹಿರಣ್ಣ ಯ್ಯನವರ ಕನ್ನಡ ಹಾಗೂ ಇಂಗ್ಲೀಶ್ ಭಾಷೆಗಳ ಮಿಶ್ರಿತ ಮಿಂಚಿನ ವಾಗ್ಜರಿ ನೆರವೇರಿದವರಲ್ಲಿ ತಮ್ತಮ್ಮ ಮಾತೃಭಾಷಾಭಿಮಾನದ ಕಿಚ್ಚನ್ನು ಹೊತ್ತಿಸುವಂತೆ ಇತ್ತು.ಕನ್ನಡದಷ್ಟೇ ಇಂಗ್ಲೀಶ್ ಭಾಷೆಯ ಮೇಲೂ ಅವರಿಗಿದ್ದ ಭಾಷಾ ಬಿಗಿಹಿಡಿತ ಹಾಗೂ ಮಾತಿನ ಚತುರತೆಯನ್ನು ಕಂಡು ಕನ್ನಡಿಗ ಸಹೋದ್ಯೋಗಿಗಳೇಕೆ ಪರ ಭಾಷಾ ಸಹೋದ್ಯೋಗಿಗಳು ಸಹ ಅಂದು ಬೆರಗಾಗಿ ಹೋಗಿದ್ದರು. ಎಪ್ಪತ್ತೇಳರ ಇಳಿವಯಸ್ಸಿನಲ್ಲೂ ಇಪ್ಪತ್ತೇಳರ ಯುವಕನಂತೆ ಪ್ರಬುದ್ದವಾದ ಹಾಗು ಹಾಸ್ಯ ತುಂಬಿದ ಮಾತಿನ ಜೋರುಮಳೆಯನ್ನೇ ಸುರಿಸಿದರು.
ಅಲ್ಲದೆ ಕನ್ನಡ ಭಾಷೆಗೆ ಮಾಸ್ತಿ, ಗುಂಡಪ್ಪನವರು, ಕೈಲಾಸಂ, ನಾ ಕಸ್ತೂರಿ ಮುಂತಾದ ಪರ ಮಾತೃಭಾಷ ಕವಿಗಳ ಅಪರಿಮಿತ ಕೊಡುಗೆಯನ್ನು ಸ್ಮರಿಸಿದರು.
ಹಿರಣ್ಣಯ್ಯನವರ ಮಾತಿನ ಪ್ರವಾಹ ನಿಲ್ಲುತ್ತಿದ್ದಂತೆಯೇ, ಹಿರಿಯ ಸಹೋದ್ಯೋಗಿಗಳು ಆಯೋಜಿಸಿದ್ದ "ಥಟ್ ಅಂತ ಹೇಳಿ" ಕನ್ನಡ ನಾಡಿಗೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳುವ ಮೂಲಕ ಒಂದರ್ಥದಲ್ಲಿ ವೀಕ್ಷಕರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿತು.
ರಸಪ್ರಶ್ನೆ ಕಾರ್ಯಕ್ರಮವೂ ಮುಗಿಯುತ್ತಿದ್ದಂತೆಯೇ ಯುವಸಹೋದ್ಯೋಗಿಗಳಿಂದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಇತ್ತು. ಅನಿಸುತಿದೆ ಯಾಕೋ ಇಂದು, ನೀ ಸನಿಹಕೆ ಬಂದರೆ.., ನೀ ಅಮೃತಧಾರೆ…, ಗಿಲ್ ಗಿಲ್ ಗಿಲಕ್ಕ್ ಕಾಲ್ಗೆಜ್ಜೆ ಝಣಕ್ಕ್.., ಈ ಗೀತೆಗಳನ್ನು ಹಾಡಿದರು. ಅನಿಸುತಿದೆ ಯಾಕೋ ಇಂದು ಹಾಡಿಗೆ ಪ್ರಥಮ ಬಹುಮಾನ ಬಂತು.
ಗಾಯನ ಸ್ಪರ್ಧೆ ಮುಗಿದ ಬಳಿಕ “ಹೆಚ್ ಕೆ ರಘು” ಎಂಬುವ ನಮ್ಮ ಕಂಪನಿಯ ಹಿರಿಯ ಸಹೋದ್ಯೋಗಿ, ಅವರು ಮಧುರವಾಗಿ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ (ಅದರಲ್ಲೂ ಹೆಚ್ಚಾಗಿ ಕನ್ನಡ ನಾಡು, ನುಡಿ ಹಾಗು ಸಂಸ್ಕೃತಿಗೆ ಸಂಬಂಧಿಸಿದ ಗೀತೆಗಳನ್ನು) ಕೆಲಕಾಲ ನಮ್ಮನ್ನು ನಾಡು, ನುಡಿ ವಿಷಯದಲ್ಲಿ ಭಾವಪರವಶರನ್ನಾಗಿ ಮಾಡಿಬಿಟ್ಟಿದ್ದರು.
ಸಮಾರಂಭದ ಮಧ್ಯಾವಧಿಯಲ್ಲಿ ಸಭಾಂಗಣ ವೀಕ್ಷಕರಿಂದ ತುಂಬಿಹೋಗಿತ್ತು, ನಮ್ಮ ಕಂಪನಿಯಲ್ಲಿ ನಡೆಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಮತ್ತು ಯಶಸ್ಸು ವೀಕ್ಷಕರ ಹಾಜರಾತಿಯ ಮೂಲಕ ತೋರ್ಪಡಿಸುತ್ತಿತ್ತು.
ಅಲ್ಲದೆ ರಿಚರ್ಡ್ ಲೂಯಿಸ್ ಹಾಗು ಎಂ. ಎಸ್ ನರಸಿಂಹಮೂರ್ತಿಯವರು ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಹಾಸ್ಯದ ಮಾತುಗಳ ಮೂಲಕ ನಮ್ಮನ್ನೆಲ್ಲ ನಗೆಯ ಹೊಳೆಯಲ್ಲಿ ತೇಲಿಸಿದರು. ಒಂದು ಹಂತದಲ್ಲಿ ರಿಚರ್ಡ್ ಲೂಯಿಸ್ ರ ಹಾಸ್ಯದ ಮಾತುಗಳ ಮೂಡಿಗೆ ಸಿಕ್ಕು ಸಮಯವಾದುದ್ದೆ ಅರಿವಿಗೆ ಬರಲಿಲ್ಲ
ನಂತರದಲ್ಲಿ ಶಿವ ಅಂತ ಹೋಗುತ್ತಿದೆ ರೋಡಿನಲ್ಲಿ.. (ಜಾಕಿ) , ಅರೆರೆರೆ ಗಿಣಿರಾಮ.. (ಗಂಧದಗುಡಿ), ಇನ್ನೂ ಹಲವಾರು ಕನ್ನಡದ ಹಾಡುಗಳಿಗೆ ಯುವಸಹೋದ್ಯೋಗಿಗಳು ಡ್ಯಾನ್ಸ್ ಮಾಡಿದರು ಹಾಗು ಕನ್ನಡ ನಾಡು, ನುಡಿ ಕುರಿತಾದ ಗೀತೆಗೆ ಕೆಲ ಸಹೃದಯಿ ಸಹೋದ್ಯೋಗಿಗಳು ಸಮೂಹ ಡ್ಯಾನ್ಸು ಮಾಡಿದರು . ಇನ್ನೂ ಕೆಲ ಸಹೋದ್ಯೋಗಿಗಳು ತುಂಬಾ ಹಾಸ್ಯಭರಿತವಾದ ಸ್ಕಿಟ್ (ರಜನಿ ಇನ್ ಇನ್ಸೈಡ್) ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನೆಲ್ಲ ಬೆರಗಾಗಿ ಮಾಡಿದ್ದು ಒರಿಸ್ಸಾದ ಯುವಸಹೋದ್ಯೋಗಿಯು ಶಿವ ಅಂತಾ ಹೋಗುತ್ತಿದ್ದೆ ರೋಡಿನಲ್ಲಿ… ಈ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದ್ದು ಹಾಗೂ ಮತ್ತೋರ್ವ ಒರಿಸ್ಸಾದ ಯುವಸಹೋದ್ಯೋಗಿಯು ಹಾಡು ಸಂತೋಷಕ್ಕೆ (ಶಂಕರ್ ನಾಗ್ ಅವರ ಗೀತಾ ಚಿತ್ರದ ಹಾಡು) ಹಾಡಿಗೆ ಡ್ಯಾನ್ಸು ಮಾಡಿದ್ದು.
ಕಾರ್ಯಕ್ರಮದಲ್ಲಿ ಕೊನೆಯಲ್ಲಿ ನಮ್ಮ ಕಂಪನಿಯ ಹಿರಿಯ ಸಹೋದ್ಯೋಗಿ ಹೆಚ್ ಕೆ ರಘು ಅವರು ಭಾವಪೂರ್ಣವಾಗಿ ಹಾಡಿದ ಕುಲದಲ್ಲಿ ಕೀಳಾವುದೋ ಹುಚ್ಚಪ್ಪ..ಮತದಲ್ಲಿ ಮೇಲ್ಯಾವುದೋ ಗೀತೆಯೊಂದಿಗೆ ನಮ್ಮ ಕಂಪನಿಯ ಈ ಸಲದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾಯಿತು. ಮುಂದಿನ ವರುಷ ನಮ್ಮ ಕನ್ನಡ ರಾಜ್ಯೋತ್ಸವವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಹಾಗು ವೈಭವದಿಂದ ಆಚರಣೆ ಮಾಡಬೇಕೆಂದು ಯೋಜನೆಯಲ್ಲಿ ಮನೆಕಡೆ ಹೆಜ್ಜೆ ಹಾಕಿದೆವು..
ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.
ಸಕತ್ತಾಗಿದೆ.. ಈ Blogಗೆ ಭೇಟಿ ನೀಡಿದಮೇಲೆಯೇ ನನಗೆ ತಿಳಿದಿದ್ಧು ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ನಮ್ಮ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಎಂದು.. ಇಲ್ಲಿನ ಚಿತ್ತಾರಗಳನ್ನು ನೋಡಿ ಬಹಳ ಸಂತೋಷವಾಯಿತು.. ಎಲ್ಲರಿಗೂ ಧನ್ಯವಾದಗಳು.. ಜೈ ಕರ್ನಾಟಕ ಮಾತೆ ..
ReplyDeleteallina habbada vaataavaranavannu nodidre,, naavu adaralli paalgolla bekaagittu antha ansatte...
ReplyDeletekhushiyaagutte nodidre,,
jai kannada maathe...nange idu nodi bahala khsushi ayitu...inthadde namma cmpny alli maadidare chennagiruthe...namma kannada vannau innu hechu hechu belesabahudu...siri ganadam gelge...
ReplyDelete- Sharan
jai bhuvaneshwari....
ReplyDeleteheege namma blore'nalli iruva prathi ondu company naada habba'vanu aacharisadare nammage yaava bere naadina bagge chinte iruvudilla....avaru nammali berethu hoguthaare....namma baashe mele preethi,gourava hechaagute.
Kannadavanu belasonna,meresonna....:-)