ಆತ್ಮೀಯರೆ ಸತತವಾಗಿ ಮೂರನೆ ಬಾರಿ ಮೈಂಡ್ಟೆಕ್ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮೈಂಡ್ಟೆಕ್ ಒಂದು ಚಿಕ್ಕ ಕಂಪನಿ, ಆದರು ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸಲು ಇಲ್ಲಿರುವ ಎಲ್ಲಾ ಕನ್ನಡಿಗರ ಮಹದಾಸೆ. ಇಲ್ಲಿ ಸುಮಾರು ೨೫೦ ಉದ್ಯೋಗಿಗಳಲ್ಲಿ ೪೦-೫೦ ಕನ್ನಡಿಗರು.
ನಾವು ಕನ್ನಡ ರಾಜ್ಯೋತ್ಸವವನ್ನು ಈ ರೀತಿ ಆಚರಿಸಿದೆವು:
- ಆಚರಣೆ ಪೂರ್ವ ಹಾಗೂ ಪರ ಎಲ್ಲಾ ರೀತಿಯ ಕನ್ನಡ ಬಳಗದವರೊಂದಿಗೆ ಮಿಂಚಂಚೆ ಸಂಭಾಷಣೆ ಕನ್ನಡದಲ್ಲಿಯೇ ನಡೆಯುತ್ತದೆ.
- ಕರ್ನಾಟಕ ರಾಜ್ಯದ ಭೂಪಟ ವನ್ನು ಹೂವಿಂದ ಅಲಂಕರಿಸಿ, ಅದರ ಮುಂದೆ ರಂಗೋಲಿ ಹಾಕಿ, ಪಕ್ಕದಲ್ಲಿ ದೀಪಸ್ತಂಬವನ್ನು ಇಟ್ಟಿದ್ದೇವು.
- ಕಂಪನಿಯ ಗಣ್ಯರಿಂದ ದೀಪ ಬೆಳಗಿಸಿ, "ಹಚ್ಚೇವು ಕನ್ನಡದ ದೀಪ" ಹಾಡನ್ನು ಹಾಡಿದೆವು.
- ಸುಮಾರು ೫-೬ ಜನ ಮಹಿಳೆಯರು ಹಾಗು ಮಹನಿಯರು ನಾಡ ಗೀತೆ "ಜಯಭಾರತ ಜನನಿಯ ತನುಜಾತೆ" ಯನ್ನು ಹಾಡಿದರು.
- ನಮ್ಮಲ್ಲೇ ಒಬ್ಬರು ಕನ್ನಡದಲ್ಲಿ ನಿರೂಪಣೆ ಮಾಡಿದೆವು. ಕನ್ನಡ ಭಾಷೆ, ನೆಲದ ಜಲದ ಬಗ್ಗೆ, ಕನ್ನಡ ಭಾಷೆಯನ್ನು ಸಂರಕ್ಷಿಸುವುದರ ಬಗ್ಗೆ, ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದರ ಬಗ್ಗೆ ಮಾತನಾಡಿದೆವು.
- ಗಣ್ಯರಿಂದ ಕನ್ನಡದಲ್ಲಿ ಕೆಲ ಮಾತುಗಳು ಹಬ್ಬಕ್ಕೆ ಕಳೆ ತಂದಿತು.
- ಸಾಂಸ್ಕ್ರುತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
- ಈ ವರ್ಷ ಗಣ್ಯರಲ್ಲಿ ಯಾರ್ಯಾರಿಗೆ ಕನ್ನಡ ಬರುವುದಿಲ್ಲವೋ ಅವರಿಗೆ "೨೫ ದಿನದಲ್ಲಿ ಕನ್ನಡ ಕಲಿಯಿರಿ" ಪುಸ್ತಕ, ಯಾರ್ಯಾರಿಗೆ ಕನ್ನಡ ಬರುವುದೋ ಅವರಿಗೆ ಕನ್ನಡ ಕಾದಂಬರಿಗಳನ್ನು ಕೊಟ್ಟೆವು.
- ಸಭಿಕರಿಗೆ ಕನ್ನಡದ ಬಗ್ಗೆ ಪ್ರಶ್ನೆಗಳು. ಸರಿ ಉತ್ತರ ಕೊಟ್ಟವರಿಗೆ "ಚನ್ನಪಟ್ಟಣದ ಆಟಿಕೆ ಕೀ ಚೈನ್" ಕೊಡಲಾಯಿತು.
- ಸುಮಾರು ೩೦ ಜನರು ಕನ್ನಡದ ಪದವುಳ್ಳ (ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ) ಟೀ ಶರ್ಟ್ ಧರಿಸಿದ್ದರು. ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಶೊಭೆ ತಂದಿತು.
- ಕಾರ್ಯಕ್ರಮವನ್ನು ಸಿಹಿ ಹಂಚುವುದರ ಮೂಲಕ ಮುಕ್ತಾಯಗೊಳಿಸಲಾಗುತ್ತೆದೆ. ಕಳೆದ ವರ್ಷ ಮೈಸೂರು ಪಾಕು, ಈ ವರ್ಷ ದಾರವಾಡ ಪೇಡ :)
- ೩೦-೪೦ ಕನ್ನಡ ಪುಸ್ತಕಗಳು ಮೈಂಡ್ಟೆಕ್ ಗ್ರಂಥಾಲಯಕ್ಕೆ ಅರ್ಪಣೆ. ಕಂಪನಿಯ ಎಲ್ಲಾ ಕನ್ನಡಿಗರಿಗೆ ಇವು ಲಭ್ಯ.
- ೨-೩ "೨೫ ದಿನದಲ್ಲಿ ಕನ್ನಡ ಕಲಿಯಿರಿ" ಪುಸ್ತಕಗಳು ಕನ್ನಡವನ್ನು ಕಲಿಯುವ ಆಸಕ್ತರಿಗೆ ಕೊಡುವುದು.
- ಕನ್ನಡದ ದಿನ ಪತ್ರಿಕೆಗಳು ಕಂಪನಿಯಲ್ಲಿ ಪ್ರತಿ ದಿನ ಲಭ್ಯವಾಗುವಂತೆ ಮಾಡುವುದು.
ಧನ್ಯವಾದಗಳು,
ಮೈಂಡ್ ಟೆಕ್ ಕನ್ನಡಿಗರು
ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.
No comments:
Post a Comment