ಮೈಂಡ್ ಟೆಕ್ ನಲ್ಲಿ ಪ್ರತಿ ವರ್ಷವೂ ಆಚರಿಸುವಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 6 ರಂದು ಆಚರಿಸಲಾಯಿತು . ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಲ್ಲಿ ಜನರು ಸಂಕಷ್ಟಕ್ಕೆ ಒಳಗಾದ ಕಾರಣ ಈ ಸಲ ಆಚರಣೆ ಸರಳವಾಗಿತ್ತು. ಇದು 4 ನೇ ವರ್ಷದ ಆಚರಣೆ.
1. ಬೆಳಿಗ್ಗೆ 10:00 ಗಂಟೆಗೆ ಎಲ್ಲರು ಆಚರಣೆಗೆ ಸೇರಿದೆವು .
2. ಕಂಪನಿಯ ಗಣ್ಯರು ಆಗಮಿಸಿದರು. ಅವರಿಂದ ದೀಪ ಬೆಳಗಿಸಿದೆವು .
3. ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದೆವು .
4. ಕಾರ್ಯಕ್ರಮ ನಿರೂಪಣೆ ಜವಾಬ್ದಾರಿಯನ್ನು ವಿನಯ್ ಮಠರವರು ವಹಿಸಿಕೊಂಡು ಚೆನ್ನಾಗಿ ನಡೆಸಿಕೊಟ್ಟರು .
5. ನಂತರ ನಾಡಗೀತೆ - ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಹಾಡಲಾಯಿತು .
6. ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ವಿನಯ್ ಮಾತನಾಡಿದರು .
7. ಗಣ್ಯರು ಕೂಡ ಕನ್ನಡದ ಬಗ್ಗೆ ಅವರಿಗಿರುವ ಅಭಿಪ್ರಾಯವನ್ನು ಹೇಳಿದರು.
8. ಪ್ರತಿ ವರ್ಷ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಿಹಿ ತಿಂಡಿಯನ್ನು ಎಲ್ಲ ಉದ್ಯೋಗಿಗಳಿಗೆ ಹಂಚುವುದರ ಮೂಲಕ ಅದರ ಪರಿಚಯ. ಇದು ಮೈಂಡ್ ಟೆಕ್ ಕನ್ನಡ ರಾಜ್ಯೋತ್ಸವದ ವಿಶೇಷ . ಈ ವರ್ಷ ಬೆಳಗಾವಿಯ "ಕರದಂಟ್ ಸಿಹಿ " ಹಂಚಿದೆವು .
9. ಕೆಲವರು ಸಮಾಜ ಸೇವಕ ಸಂಘದ ಕನ್ನಡ ಪದ್ಯವುಳ್ಳ ಟಿ- ಶರ್ಟ್ ಧರಿಸಿದ್ದರು.ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.
No comments:
Post a Comment