ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ. ರವಿಶಂಕರ್ ಅವರ ಕೊಳಲುವಾದನ ಕನ್ನಡ ಆರಾಧನೆಗೆ ಕನ್ನಡಿ ಹಿಡಿದಂತಿತ್ತು. ಕನ್ನಡದ ರವಿ ಮೂಡಿಬಂದ ಸಮೂಹಗಾಯನ ಆ ಸಂಜೆಗೆ ರಂಗೇರಿಸಿತ್ತು.
ಮಂಥರೆಯ ದುರ್ಮಂತ್ರ, ಆ ಸಂಜೆಯ ರಸದೌತಣಕ್ಕಾಗೆ ಆಯೋಜಿಸಿದ್ದ ಯಕ್ಷಗಾನ, ಸುಮಾರು ೨೦೦ ರಸಿಕರನ್ನು; ತಮ್ಮ ಕೆಲಸಗಳ ಒತ್ತಡಗಳನ್ನು ಬದಿಗೊತ್ತಿ ಗಂಧರ್ವಲೋಕದಲ್ಲಿ ತೆಲಾಡುವಂತೆ ಮಾಡಿತು.
ಮಂಥರೆಯ ದುರ್ಮಂತ್ರ ರಾಮಾಯಣದಲ್ಲಿ ಮಂಥರೆಯು ಭರತನ ತಾಯಿ ಕೈಕೇಯಿಗೆ ಚಾಡಿ ಹೇಳುವ ಪ್ರಸಂಗ. ಸರ್ವಶ್ರೀ ಮಂಟಪ ಉಪಾದ್ಯಾಯರ ಕೈಕೇಯಿ ಸ್ತ್ರೀ ವೇಷದ ಅಂದ ಚೆಂದ, ವಯ್ಯಾರದ ನಡಿಗೆ, ಹಾವ ಭಾವ ನೋಡಿ ನೆರೆದಿದ್ದ ಮಹಿಳೆಯರು ಅಸೂಯೆಪಟ್ಟು; ಉಪಾಧ್ಯಾಯರು ನಿಜವಾಗಿ ಸ್ತ್ರೀಯಲ್ಲವೆಂದು ಸಮಾಧಾನವಾದರು. ದುರ್ಮಂತ್ರ ಹೇಳಲು ಬಂದ ಯಕ್ಷಲೋಕದ ಹಾಸ್ಯ ಕಲಾವಿದರಾದ ಶ್ರೀ. ಚಪ್ಪರ್ಮನೆ ಶ್ರೀಧರ ಹೆಗ್ಡೆ ಮಂಥರೆಯಾಗಿ ಮಿಂಚಿದರು. ಅವರ ಕಲಾ ಫ್ರೌಡಿಮೆ, ಅಭಿನಯದಲ್ಲಿ ತೋರಿದ ಹಲವು ಮಜಲು, ಮುಖಭಾವ, ಹಣ್ಣು ಹಣ್ಣು ಮುದುಕಿ ಕುರೂಪಿ ಮಂಥರೆಯ ನಡೆ ಭಂಗಿ, ಕನ್ನಡ ಗಂಧವೇ ಇಲ್ಲದ ವೀಕ್ಷಕರ ಮಂತ್ರಮುಗ್ದತೆಯೇ ತುಲನೆಗೆ ಅಸಾದ್ಯವೆಂದು ಸಾರಿಹೇಳಿತ್ತು. ಸುಮಾರು ೫೦೦ - ೬೦೦ ವರುಷ ಪರಂಪರೆ ಇರುವ ಯಕ್ಷಗಾನ ಪ್ರದರ್ಶನ, ವಿವಿಧ ಭಾಷೆ, ಸಂಸ್ಕೃತಿ; ಸಭೀಕರ ಮೆಚ್ಚುಗೆಯ ಕರತಾಡನವೇ ಕಾರ್ಯಕ್ರಮದ ಯಶಸ್ಸಿಗೆ ಮುದ್ರೆಯೋತ್ತಿದಂತಿತ್ತು.
ಚಿತ್ರಗಳು:
ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.
No comments:
Post a Comment