Saturday, February 7, 2009

ಸಿಂಬಿಯನ್ ಸಂಸ್ಥೆಯಲ್ಲಿ ನಾಡ ಹಬ್ಬ

ಸಿಂಬಿಯನ್ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್ ವತಿಯಿಂದ ಕನ್ನಡರಾಜ್ಯೋತ್ಸವದ ಅಂಗವಾಗಿ ಕನ್ನಡಭಾಷೆ, ಇತಿಹಾಸದ ಬಗ್ಗೆ ಜಾಗೃತಿಮೂಡಿಸುವ ಒಂದು ಕಿರುಪ್ರಯತ್ನವಾಗಿ ನವೆಂಬರ್ ೨೫ ರಂದು ರಸಪ್ರಶ್ನೆ ಕಾರ್ಯಕ್ರಮ ಮಾಡಲಾಯಿತು.

ಈ ಒಂದು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸುಮಾರು ೧೫ ಪ್ರಶ್ನೆಗಳನ್ನು ಆಯ್ಕೆಮಾಡಿ ಕನ್ನಡೇತರರಿಗೆ ಕೇಳಲಾಯಿತು. ಸುಮಾರು ೨೫ ಕನ್ನಡಿಗರು ೭೫ ಅನ್ಯಭಾಷಿಗರು ಇದರಲ್ಲಿ ಪಾಲ್ಗೊಂಡಿದ್ದರು. ಕನ್ನಡಿಗರು ಉತ್ತರ ಹುಡುಕಲು ಕನ್ನಡೇತರರಿಗೆ ಸಹಾಯಕರಾಗಿ ಮಾರ್ಗದರ್ಶನಮಾಡಿದರು. ಇದರಿಂದಾಗಿ ಕನ್ನಡ ಗೊತ್ತಿದ್ದವರಿಗೆ ಇನ್ನಷ್ಟು ವಿಚಾರ ತಿಳಿಯುವಂತಾಗಿದ್ದಲ್ಲದೆ ಕನ್ನಡ ಗೊತ್ತಿಲ್ಲದವರಿಗೆ ಕನ್ನಡದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವಂತಾಯಿತು.

ನವೆಂಬರ್ ೨೬ರಂದು ಆಯ್ಕೆಮಾಡಿದ ಸುಮಾರು ೩೦ ರಿಂದ ೪೦ ಜನಕ್ಕೆ ಕನ್ನಡದಲ್ಲಿ ಪದಬಂದ ನೀಡಲಾಯಿತು. ಈ ಸಂದರ್ಭದಲ್ಲಿ ಸುಮಾರು ೩೦ರಷ್ಟು ಜನ ಅನ್ಯಭಾಷಿಗರು ಕನ್ನಡದಲ್ಲಿ ತಮ್ಮ ಹೆಸರನ್ನು ಬರೆಯುವಂತಾಯಿತು.

ಡಿಸೆಂಬರ್ ೧೨ರಂದು ಗಾಳಿಪಟ ಹಾರಿಸುವ ಹಬ್ಬದ ಮೂಲಕ ಕನ್ನಡಭಾಷೆ ಮಾತಾಡುವಂತೆ ಪ್ರಯತ್ನ ಮಾಡಲಾಯಿತು.
ಹೀಗೆ ಕನ್ನಡ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಚರಿಸಲಾಯಿತು.

ಚಿತ್ರಗಳು:

ಗಾಳಿ ಪಟ ಹಾರಿಸ್ತಾ ಇರೋ ಸಿಂಬಿಯನ್ ಹುಡುಗರು :)

ಇನ್ನಷ್ಟು ಚಿತ್ರಗಳಿಗೆ:
http://picasaweb.google.co.in/naveen.nanjundappa/KannadaHabba#

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

3 comments:

  1. super suddi. keli santhosha aythu. ide reeti ella company galalli Rajyotsava acharisi kannadada vatavarana huttali.

    ReplyDelete
  2. ಸಕತ್ ವರದಿ ಗುರು,,,
    ಗಾಳಿಪಟ ಹಾರಸಿದ್ದು ಇದೇ ಮೊದಲು ಅನ್ನಿಸುತ್ತೆ :)

    ಎಲ್ಲರಿಗೂ ಅಭಿನಂದನೆ

    ReplyDelete
  3. ಅರೆ ನಾನು ಅದೇ SJR ಕಟ್ಟಡದಲ್ಲೇ ಕೆಲಸ ಮಾಡುತ್ತಿದ್ದರು ನನಗೆ ಗೊತ್ತಾಗಲೇ ಇಲ್ಲ. ಇದು ತುಂಬ ಒಳ್ಳೆಯ ಸುದ್ದಿ. ಇದೆ ರೀತಿ ಕನ್ನಡ ಕಾರ್ಯಕ್ರಮಗಳು ಎಲ್ಲಾ IT ಕಂಪೆನಿಗಳಲ್ಲಿ ನಡೆಸಿಕೊಂಡು ಬಂದರೆ ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಉಳಿಯುತ್ತೆ.

    ಇಂತಿ,
    ದೇವರಾಜ್

    ReplyDelete