Monday, November 30, 2009

SAP ಲ್ಯಾಬ್ಸ್ ಅಲ್ಲಿ ನಡೆದ ಕನ್ನಡ ನಾಡ ಹಬ್ಬ 2009


೬-೧೧-೨೦೦೯ ಶುಕ್ರವಾರದಂದು ಎಸ್ ಏ ಪಿ ಲಾಬ್ಸ್ ಅಂಗಳದಲ್ಲೆಲ್ಲ ಹಬ್ಬದ ವಾತಾವರಣ. ಬೆಳ್ಳಂ-ಬೆಳಿಗ್ಗೆ ೭.೫೦ ರಿಂದಲೇ ಜನರ ಸಡಗರ ಶುರುವಾಗಿತ್ತು. ಚಮಕ್-ಧಮಕ್ ಆಗಿ ತಯಾರಾಗಿ ಬಂದ ಆಸಕ್ತರೆಲ್ಲರೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಜ್ಜಾಗಿದ್ದರು. ಅಜಯ್ ರಾವ್, ಅರುಣ್ ಆರ್, ಚಂದನ್, ಅನುಪಮ ಅವರುಗಳಿಂದ ರಿಸೆಪ್ಶನ್ ಬ್ಲಾಕ್ ಪಕ್ಕದಲ್ಲಿ ನಾಡ ಗೀತೆಯೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ನೆರೆದವರಿಗೆಲ್ಲರಿಗೂ ಮೈಸೂರ್-ಪಾಕ್ ಹಂಚಲಾಯಿತು.




ಮಧ್ಯಾಹ್ನ ಸುಮಾರು ೩.೧೫ ಘಂಟೆಗೆ ಊಟದ ನಂತರದ ಅರೆ ನಿದ್ದೆಯಲ್ಲಿದ್ದವರನ್ನೆಲ್ಲ ಎಚ್ಚರ ಗೊಳಿಸುವಂತೆ "ಜಾನಪದ ಲೋಕ(ರಾಮ ನಗರ) ದಿಂದ ಬಂದಿದ್ದ ಡೊಳ್ಳು-ಕುಣಿತ ಹಾಗು ಕಂಸಾಳೆ ತಂಡದವರ ಕಾಂಪಸ್-ಪ್ರದಕ್ಷಿಣೆ ಆರಂಭಗೊಳ್ಳುವಂತೆಯೇ ಅನೇಕರು ಅವರ ಜೊತೆ-ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಾ ಕುಣಿದು-ಕುಪ್ಪಳಿಸಿದರು. 


೩.೩೦ ರ ಹೊತ್ತಿಗೆ ಸಭಾಂಗಣದಲ್ಲಿ ತುಂಬು ಪ್ರೇಕ್ಷಕರು ಕಾರ್ಯಕ್ರಮದ ಆರಂಭಕ್ಕೆ ಕುತೂಹಲದಿಂದ ಕಾದಿದ್ದರು. ಊರ ಜಾತ್ರೆಯನ್ನು ನೆನಪು ಮಾಡುವಂತೆ ತಾಯಿ ಭುವನೇಶ್ವರಿಯ ಪಲ್ಲಕ್ಕಿ ವೇದ-ಘೋಷ, ಕೋಲಾಟ ಇತ್ಯಾದಿಗಳೊಂದಿಗೆ ಮೆರವಣಿಗೆಯಾಯಿತು. ಕಾರ್ಯಕ್ರಮದ ಸೂತ್ರಧಾರಿಗಳೂ ನಿರೂಪಕರಾದ ಗೋವಿಂದ್ ದಾಮೋದರ್ ಹಾಗೂ ಶರ್ಮಿಳಾ.ಎಸ್ ಹಾಗೂ ಸುಮೀತ್ ಮೂವರೂ ಜನರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಅರುಣ್ ಶಂಕರ್, ಅಜಯ ರಾವ್, ವಸುಧೇಂದ್ರ ರಾವ್ ಅವರುಗಳು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಆರಂಭಿಸಿದರು. ನಂತರ "ಗೆಳೆಯರ ಬಳಗದ" ಕಿರು ಪರಿಚಯವನ್ನು ಅರುಣ್ ಆರ್ ನೀಡಿದರು.


ಜೆನಿಸಿಸ್ ಕಂಪನಿಯ ಉದ್ಯೋಗಿ ಹಾಗು ಪ್ರಖ್ಯಾತ ಕನ್ನಡ ಬರಹಗಾರರಾದ ವಸುಧೇಂದ್ರ ಅವರು "ಭಾಷೆ-ತಾಯ್ನಾಡಿನ" ಮೋಹ ಹಾಗೂ ಅಭಿಮಾನಗಳ ಕುರಿತು ಪುರಾಣ-ಪುಣ್ಯಕಥೆಗಳ ಹೋಲಿಕೆಗಳೊಂದಿಗೆ ಅದ್ಭುತವಾದ ವಿವರಣೆಯನ್ನು ಸಭೆಗೆ ನೀಡಿದರು. ಶಿಲ್ಪ ಕೆ ಅವರು ತಮ್ಮ  ಭೀಮನನ್ನು ಕುರಿತು ಅಪರೂಪದ ದೇವರನಾಮದೊಂದಿಗೆ ಜನರ ಕಿವಿಗಳನ್ನು ಇಂಪುಗೊಳಿಸಿದರು. ಜಾನಪದ ನ್ರುತ್ಯಗಳಲ್ಲಿ ಬಹಳ ಖ್ಯಾತಿಯನ್ನು ಹೊಂದಿದ ಕಂಸಾಳೆ ನೃತ್ಯ ಶುರುವಾಗುತ್ತಲೇ ಜನರು ಕೂತು ಕೂತಲ್ಲಿಯೇ ಕಾಲು ಕುಣಿಸಿದ್ದರು. ಹಳೆ ನೆನಪುಗಳನ್ನು ತಾಜಾ ಗೊಳಿಸಲು ಸೌಮ್ಯಶ್ರೀ ತಂಡದವರು ಆಯ್ದ ೩ ಹಳೇ ಕನ್ನಡ ಚಿತ್ರ ಗೀತೆಗಳನ್ನು ಕೂಡಿಸಿ ಗಿಲಿ ಗಿಲಿ ಗಿಲಕ್ಕು ಹಾಡಿನೊಂದಿಗೆ ತಮ್ಮ ನೃತ್ಯವನ್ನು ಅಂತ್ಯಗೊಳಿಸಿದರು. 


ವೃಂದ-ಗಾನ ತಂಡದವರು  ಕನ್ನಡದ ಕವಿಗಳಿಗೆ ಗೌರವ ಸೂಚಿತವಾಗಿ ೭ ಖ್ಯಾತ ಭಾವಗೀತೆಗಳನ್ನು ಒಗ್ಗೂಡಿಸಿ ಮೆಡ್ಲಿ ರೂಪದಲ್ಲಿ ಪ್ರಸ್ತುತಗೊಳಿಸಿದರು. ವೇದಿಕೆಯ ಹಿಮ್ಮೇಳದಲ್ಲಿ ಆಯಾ ಕವಿಗಳನ್ನು ಕುರಿತು ಸಣ್ಣ ಮಾಹಿತಿಗಳನ್ನೂ ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಗಿತ್ತು. ನಾವಿದ್ದ ಸ್ಥಳದ ಭಾಷೆ ಬಾರದಿದ್ದಾಗ ಆಗುವ ಅನರ್ಥಗಳು ಹಾಗು ಅನಾನುಕೂಲಗಳನ್ನು ಕುರಿತು ಹರ್ಷ ಹಾಗು ತಂಡದವರಿಂದ ಸಣ್ಣ ನಾಟಕ ಪ್ರದರ್ಶನವಾಯಿತು. ಜನರನ್ನು ಜಾಗರೂಕವಾಗಿ ರಂಜಿಸುವಲ್ಲಿ ಈ ತಂಡ ಗೆದ್ದಿತ್ತು. ಕಾರ್ಯಕ್ರಮದ ಮುನ್ನ ಏರ್ಪಡಿಸಲಾಗಿದ್ದ ೪ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಲೋಪಮುದ್ರ ಅವರು ನೆರ‍ವೇರಿಸಿಕೊಟ್ಟರು. ವಿಜೇತರಿಗೆಲ್ಲ ಶುಭ ಕೋರುತ್ತ ಜಾತ್ರೆ-ಕಾರ್ಯಕ್ರಮ ಮುಂದುವರೆಯಿತು.


ನಗಿಸಿತ್ತಲೇ ಜನರನ್ನು ಜಾಗ್ರುತಗೊಳಿಸುವ ಕೆಲಸದ ಜವಾಬ್ದಾರಿ ಹೊತ್ತ "ಮ್ಯಾಡ್ ಆಡ್ಸ್" ತಂಡದವರು ೩ ತುಣುಕುಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು. ಪ್ರವಾಹ-ಪೀಡಿತರ ಸಹಾಯದ ಚಿಕ್ಕದಾದ ಚೊಕ್ಕದಾದ ಮಾಹಿತಿಯೊಂದಿಗೆ ತಮ್ಮ ಪ್ರಸ್ತುತಿಯನ್ನು ಮುಗಿಸಿದರು. ವರುಣನ ಶಾಂತ-ರೌದ್ರ ರೂಪಗಳನ್ನು ಕುರಿತು "ಕಂಟೆಂಪೊರರಿ ನೃತ್ಯ" ಪ್ರದರ್ಶಿಸಲಾಯಿತು. ಮನುಷ್ಯನು ತಾನೂ ಬದುಕಿ ಇನ್ನೊಬ್ಬರಿಗೂ ಬದುಕಲು ಬಿಟ್ಟರೆ ಪ್ರಕೃತಿ-ವಿಕೋಪಗಳು ಸಂಭವಿಸವು ಎಂಬ ಸೂಚನೆಯೊಂದಿಗೆ ನೃತ್ಯ ಕೊನೆಗೊಂಡಿತು.


ಇತ್ತೀಚೆಗಾದ ಪ್ರವಾಹದಿಂದ ತೊಂದರೆಗೊಳಗಾದ ಸ್ಥಳಗಳಲ್ಲೊಂದಾಗ ರಾಯಚೂರು ಜಿಲ್ಲೆಯ ಚಿಕ್ಕಸಗೂರು ಗ್ರಾಮ  ಗೆಳೆಯರ ಬಳಗದ ಭೇಟಿಯನ್ನು ಕುರಿತು ಒಂದು ಸಣ್ಣ ಮಾಹಿತಿ ಅಶೋಕ್ ಕುಮಾರ್ ರವರು ನೀಡಿದರು.  ನಂತರ ಅನುಪಮ-ಅರ್ಚನ ತಂಡದವರಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿನ ಉಡುಗೆ ತೊಡುಗೆಗಳನ್ನು ಪ್ರದರ್ಶಿಸಲಾಯಿತು. ಆಯಾ ಭಾಗದ ವೈಶಿಷ್ಠ್ಯಗಳನ್ನು ಕೂಡಾ ವೇದಿಕೆಯ ಮೇಲೆ ಪ್ರದರ್ಶಿಸಲಾಗಿತ್ತು. ಹಿನ್ನೆಲೆಯಲ್ಲಿ ಆಯಾ ಭಾಗಗಳ ಕುರಿತು ಸಣ್ಣ ಮಾಹಿತಿಗಳನ್ನು ಹಾಗೂ ಅಲ್ಲಿಯ ಮೂಲದ ಪ್ರಖ್ಯಾತ ವ್ಯಕ್ತಿಗಳ ಮಾಹಿತಿಯನ್ನೂ ನೀಡಲಾಗಿತ್ತು. ಸಣ್ಣ ವಂದನಾರ್ಪಣೆಯ ನಂತರ "ಸಂತೋಷಕ್ಕೆ" ಹಾಗೂ "ಒಂದು ಕನಸು" ಹಾಡುಗಳ ನೃತ್ಯದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಚಿತ್ರಗಳು:

















































ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

5 comments:

  1. for more pictures..

    http://picasaweb.google.com/arun.rac/KR09RajyotsavaSLI#

    ReplyDelete
  2. the entire show was an outperformer till date... the true mesmerizers of SAP :-)

    ReplyDelete
  3. Show recieved comments like "Best ever show in SAP"...

    ReplyDelete
  4. ಒಳ್ಳೆ ಕೆಲಸ ಮಾಡಿದೀರಿ. ಚೆನ್ನಾಗಿ ಮಾಡಿದೀರಿ.
    ಖುಷಿಯಾಯ್ತು ವರದಿ ಓದಿ.
    ದಯವಿಟ್ಟು ಇಂಥದನ್ನು ಮುಂದುವರೆಸಿ.

    ನಲ್ಮೆ,
    ಚೇತನಾ ತೀರ್ಥಹಳ್ಳಿ

    ReplyDelete